Posts

ಉದ್ದಿನ ದೋಸೆ

Image
 ಬೇಕಾಗುವ ಸಾಮಾಗ್ರಿಗಳು : ಬಿಳಿ ಕುಚ್ಚಲಕ್ಕಿ ಒಂದು ಕಪ್, ದೋಸೆ ಅಕ್ಕಿ ಎರಡು ಕಪ್, ಉದ್ದಿನಬೇಳೆ ಒಂದು ಕಪ್, ಮೆಂತೆ ಕಾಲು ಚಾ ಚಮಚ, ಉಪ್ಪು ರುಚಿಗೆ ಮೇಲಿನ ವಸ್ತುಗಳನ್ನು ತೊಳೆದು ಕನಿಷ್ಠ ನಾಲ್ಕು ಗಂಟೆ ನೀರಿನಲ್ಲಿ ನೆನೆಹಾಕಿ ಇಡಬೇಕು.   ಆಮೇಲೆ ಇನ್ನೊಮ್ಮೆ ತೊಳೆದು ರುಬ್ಬಬೇಕು.ರುಚಿಗೆ ಬೇಕಾದಷ್ಪ್ಪುಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಇಡಿ . ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಬೇಕು. ಕನಿಷ್ಟ ಆರು ಗಂಟೆಯ ನಂತರ ದೋಸೆ ಹಾಕಬೇಕು.

ಮನೆಯಲ್ಲಿ ಮಾಡಿದ ಉದ್ದಿನ ದೋಸೆ ಮತ್ತು ಚಟ್ನಿ.

Image

ಕಡ್ಲೆ ಉಪ್ಕರಿ.

Image

ಕಾಂದ ಪೋಹ

Image
 ಬೇಕಾಗುವ ಸಾಮಾಗ್ರಿಗಳು: ದಪ್ಪ ಅವಲಕ್ಕಿ 3 ಕಪ್ ನೀರುಳ್ಳಿ 2 ಮದ್ಯಮ ಗಾತ್ರ ನೆಲಗಡಲೆ ಬೀಜ ಅರ್ದ ಕಪ್ ಸಾಸಿವೆ 1 ಟೀ ಚಮಚ ಉದ್ದಿನ ಬೇಳೆ 1 ಟೀ ಚಮಚ ಹಸಿಮೆಣಸಿನಕಾಯಿ 3 ಕರಿಬೇವಿನ ಎಲೆ ಹತ್ತರಿಂದ ಹದಿನೈದು. ಕಾಂದಪೋಹೆ ಹಳದಿ ಹುಡಿ ಕಾಲು ಟೀ ಚಮಚಕ್ಕಿಂತ ಸ್ವಲ್ಪ ಜಾಸ್ತಿ ಉಪ್ಪು ರುಚಿಗೆ ತಕ್ಕಂತೆ ಸಕ್ಕರೆ ಒಂದೂವರೆ ಟಿ ಚಮಚ ಕೊತ್ತಂಬರಿ ಸೊಪ್ಪು ಸ್ವಲ್ಪ ಎಣ್ಣೆ 4 ಟಿ ಚಮಚ.    ಮಾಡುವ ವಿಧಾನ : ಮೊದಲು ಅವಲಕ್ಕಿ ಎರಡು ಸಲ ತೊಳೆದು ನೀರು ಬಸಿದಿಟ್ಟುಕೊಳ್ಳಬೇಕು. ಒಂದು ಬಾಣಲೆಗೆ 4 ಟಿ ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ . ಸಾಸಿವೆ ಸಿಡಿಯಲು ಆರಂಬಿಸಿದಾಗ ಕಡಲೆ ಬೀಜ ಮತ್ತು ಉದ್ದಿನ ಬೇಳೆ ಹಾಕಿ.ಉದ್ದಿನಬೇಳೆ ಕೆಂಪಾದಾಗ ಹಸಿಮೆಣಸು , ಕರಿಬೇವು ಹಾಕಿ. ಹಚ್ಚಿದ ನೀರುಳ್ಳಿ  ಹಾಕಿ. ಉಪ್ಪು ಸಕ್ಕರೆ ಹಾಕಿ.ನೀರುಳ್ಳಿ ಚೆನ್ನಾಗಿ ಹುರಿಯಿರಿ.  ಹಳದಿ ಹುಡಿ ಹಾಕಿ ಮಿಕ್ಸ್ ಮಾಡಿ .ಅವಲಕ್ಕಿಯನ್ನು ಚೆನ್ನಾಗಿ ಉದುರುದುರಾಗಿ ಮಾಡಿಕೊಂಡು  ಬಾಣಲೆಗೆ ಹಾಕಿ. ಚೆನ್ನಾಗಿ ಸಟ್ಟುಗ ತಿರುಗಿಸುತಾ ಬಿಸಿ ಮಾಡಿ ತಳ ಹಿಡಿಯದಂತೆ ಜಾಗ್ರತೆ ವಹಿಸಿ.ರುಚಿ ನೋಡಿಕೊಂಡು ಒಲೆಯ ಬೆಂಕಿ ಆರಿಸಿ.ಮೇಲೆ ಕೊತ್ತಂಬರಿಸೊಪ್ಪು ಹಾಕಿ.ಬೇಕಾದರೆ ಬಟಾಟೆ ಫ್ರೈ ಮಾಡಿ ಹಾಕಬಹುದು.